ಬಸವಣ್ಣ   
  ವಚನ - 433     
 
ವೇಷ ಅವಿಚಾರದಲ್ಲಿ ನಡೆಯಿತ್ತೆಂದು ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ: ಹರಿಯನೆ ದಾಸನ ವಸ್ತ್ರವ? ಉಣ್ಣನೆ ಚೆನ್ನಯ್ಯನ ಸಂಗಾತ? ಪರವಧುವ ಕೊಳ್ಳನೆ ಸಿಂಧುಬಲ್ಲಾಳನ? ಬೇಡನೆ ಸಿರಿಯಾಳನ ಮಗನ? ನಡೆವುದು ನುಡಿವುದು ಅವಿಚಾರವೆಂದು, ಭಾವ ವಿಭಾವವೆಂದು ಕಂಡೆನಾದರೆ ತಪ್ಪೆನ್ನದು, ಮೂಗ ಕೊಯಿ! ಕೂಡಲಸಂಗಮದೇವಾ.