ಬಸವಣ್ಣ   
  ವಚನ - 435     
 
ದೇವನಿಂತಹನೆಂದು ತೋರಿಕೊಡುವೆನು ಗಣಂಗಳಿಗೆ: ಬಲ್ಲಾಳನ ವಧುವ ಬೇಡಿದಾತನೀ ದೇವ! ದೇವನಿಂತಹನೆಂದು ತೋರಿಕೊಡುವೆನು ಗಣಂಗಳಿಗೆ: ದಾಸನ ವಸ್ತ್ರವ ಬೇಡಿದಾತನೀ ದೇವ! ದೇವನಿಂತಹನೆಂದು ತೋರಿಕೊಡುವೆನು ಗಣಂಗಳಿಗೆ: ಸಿರಿಯಾಳನ ಮಗನ ಬೇಡಿದಾತನೀ ದೇವ! ಕೂಡಲಸಂಗಮದೇವ ಜಂಗಮ ಮುಖಲಿಂಗವಾಗಿ, ಕಾಡಿ ನೋಡುವ, ಬೇಡಿ ನೋಡುವ!