ಬಸವಣ್ಣ   
  ವಚನ - 440     
 
ಹರಗಣಪಂಕ್ತಿಯ ನಡುವೆ ಕುಳ್ಳಿರ್ದು ನಾನು ಒಡೆಯತನದ ನಾಯತೇಜವ ಹೊತ್ತುಕೊಂಡು- ಮಡದಿಯೆನ್ನಗಲೊಳಗೆ ಸಕಲದೇವಾನ್ನವ! ಒಡೆಯರಿಂದಲೂ ಮಿಗಿಲಾಗಿಕ್ಕಲು, ತೆಗೆದಿರಿಸಿದೆನು! ಈ ಪರಿಯ ಆಯ ಕಣ್ಗೆ ತೋರಲು ಕಲ್ಮಷವಾದುವು! ಕರುಣಿ ಚೆನ್ನಬಸವಣ್ಣ(ನ), ಮರೆದುಕೊಂಡೆನಾದರೆ, ಒಡೆಯ ಕೂಡಲಸಂಗಯ್ಯ ಕೆಡಹಿ ನರಕದಲ್ಲಿಕ್ಕುವ.