ಬಸವಣ್ಣ   
  ವಚನ - 443     
 
ಚಂದ್ರ ಶೈತ್ಯದಲು ಬೆಳೆದ ಕಾಯಕ್ಕೆ ಬೆಳುದಿಂಗಳ ಬಯಸುವ ಹಂಗೇಕಯ್ಯಾ? ಶರಣರ ಸಂಗದಲಿರ್ದು ಶಿವನ ಬೇಡುವ ಹಂಗೇಕಯ್ಯಾ? ಕೂಡಲಸಂಗಯ್ಯನ ಶರಣರು ಬಂದು ತಮ್ಮವನೆಂದರೆ ಸಾಲದೆ ಅಯ್ಯಾ?