ಬಸವಣ್ಣ   
  ವಚನ - 444     
 
ದಾಸನ ವಸ್ತ್ರವ ಬೇಡದ ಮುನ್ನ ತವನಿಧಿಯನಿತ್ತರೆ ನಿಮ್ಮ ದೇವರೆಂದೆಂಬೆ! ಸಿರಿಯಾಳನ ಮಗನ ಬೇಡದ ಮುನ್ನ ಕಂಚಿಯ ಪುರವ ಕೈಲಾಸಕ್ಕೊಯ್ದರೆ ನಿಮ್ಮ ದೇವರೆಂದೆಂಬೆ! ಬಲ್ಲಾಳನ ವಧುವ ಬೇಡದ ಮುನ್ನ ಸ್ವಯಲಿಂಗವಾದರೆ ನಿಮ್ಮ ದೇವರೆಂದೆಂಬೆ! ದೇಹಿ ನೀನು, ವ್ಯಾಪಾರಿಗಳು ನಮ್ಮವರು! ಬೇಡು, ಕೂಡಲಸಂಗಮದೇವಾ, ಎಮ್ಮವರ ಕೈಯಲು!