ಬಸವಣ್ಣ   
  ವಚನ - 445     
 
ಎಲ್ಲರೂ ವೀರರು, ಎಲ್ಲರೂ ಧೀರರು; ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು; ಕಾಳಗದ ಮುಖದಲ್ಲಿ ಕಾಣಬಾರದು, ಓಡುವ ಮುಖದಲ್ಲಿ ಕಾಣಬಹುದು! ನಮ್ಮ ಕೂಡಲಸಂಗನ ಶರಣರು ಧೀರರು, ಉಳಿದವರೆಲ್ಲರೂ ಅಧೀರರು.