ಬಸವಣ್ಣ   
  ವಚನ - 455     
 
ಶ್ರೀವಿಭೂತಿಯ ಹೂಸದವರ, ಶ್ರೀರುದ್ರಾಕ್ಷಿಯ ಧರಿಸದವರ, ನಿತ್ಯ ಲಿಂಗಾರ್ಚನೆಯ ಮಾಡದವರ, ಜಂಗಮವೇ ಲಿಂಗವೆಂದರಿಯದವರ, ಸದ್ಭಕ್ತರ ಸಂಗದಲ್ಲಿರದವರ ಎನಗೊಮ್ಮೆ ತೋರದಿರು. ಕೂಡಲಸಂಗಮದೇವಾ, ಸೆರಗೊಡ್ಡಿ ಬೇಡುವೆನು!