ಬಸವಣ್ಣ   
  ವಚನ - 463     
 
ಅಹುದೆಂದರಿಯೆ, ಆಗದೆಂದರಿಯೆ, ಆದಿಯ ಪಥವ ತೋರಲರಿಯೆ, ಸತ್ಯವನರಿಯೆ, ಸಹಜವನರಿಯೆ, ಸಜ್ಜನ ಶುದ್ಧವ ಮುನ್ನವೇ ಅರಿಯೆ! ನಿಮ್ಮ ಶರಣರ ಒಕ್ಕುದನುಂಡಿಪ್ಪೆ, ಕೂಡಲಸಂಗಮದೇವಾ.