ಬಸವಣ್ಣ   
  ವಚನ - 468     
 
ತೊತ್ತಿಂಗೆ ಲಕ್ಷಣವೇಕಯ್ಯಾ? ಅವರೊಕ್ಕುದನುಂಡು ಮಿಕ್ಕುದ ಕಾಯ್ದಿಕೊಂಡಿಪ್ಪುದು. ಸಾರೆ ಹೊರಸೇಕೆ? ಅವಳಿಗೆ ಮಾರುತ್ತರವೇಕೆ? ಕೂಡಲಸಂಗನ ಶರಣರೊಡನೆ ಇದಿರುತ್ತರವೇಕೆ ಸಿಂಬಕಂಗೆ?