ಬಸವಣ್ಣ   
  ವಚನ - 471     
 
ನಾನು ಹೊತ್ತ ಹುಳ್ಳೆಯ ಹೊರೆಯನಂಬಲಿಗೆ ಕೊಂಬುವರಿಲ್ಲ ನೋಡಯ್ಯಾ. ಆನು ನಿಮ್ಮ ಶರಣರ ಒಕ್ಕುದನುಂಡು ಬದುಕಿದೆನಯ್ಯಾ. ಮೇರುವ ಸಾರಿದ ಕಾಗೆ ಹೊಂಬಣ್ಣವಪ್ಪುದು ತಪ್ಪದು ಕೂಡಲಸಂಗಮದೇವಾ.