ಬಸವಣ್ಣ   
  ವಚನ - 477     
 
ಹೊರಗೆ ಹೂಸಿ ಏವೆನಯ್ಯಾ, ಒಳಗೆ ಶುದ್ಧವಾಗದನ್ನಕ್ಕ? ಮಣಿಯ ಕಟ್ಟಿ ಏವೆನಯ್ಯಾ. ಮನ ಮುಟ್ಟದನ್ನಕ್ಕ? ನೂರನೋದಿ ಏವೆನಯ್ಯಾ, ನಮ್ಮ ಕೂಡಲಸಂಗಮದೇವರ ಮನಮುಟ್ಟಿ ನೆನೆಯದನ್ನಕ್ಕ?