ಬಸವಣ್ಣ   
  ವಚನ - 480     
 
ನಾ ನಿಮ್ಮ ನೆನೆವನು: ನೀವೆನ್ನನರಿಯಿರಿ; ನಾ ನಿಮ್ಮನೋಲೈಸುವೆನು; ನೀವೆನ್ನ ಕಾಣಿರಿ. ನಾನೆಂತು ಬದುಕುವೆನೆಂತು ಜೀವಿಸುವೆನಯ್ಯಾ? ಕೂಡಲಸಂಗಮದೇವಾ, ಎನಗೆ ನೀನೇ ಪ್ರಾಣ ಗತಿ-ಮತಿ ನೋಡಯ್ಯಾ!