ಬಸವಣ್ಣ   
  ವಚನ - 485     
 
ಅಂಗೈಯೊಳಗಣ ಲಿಂಗವ ನೋಡುತ್ತ, ಕಂಗಳು ಕಡೆಗೋಡಿವರಿವುತ್ತ ಸುರಿಯುತ್ತ ಎಂದಿಪ್ಪೆನೊ? ನೋಟವೇ ಪ್ರಾಣವಾಗಿ ಎಂದಿಪ್ಪೆನೊ? ಕೂಟವೇ ಪ್ರಾಣವಾಗಿ ಎಂದಿಪ್ಪೆನೊ ಎನ್ನಂಗವಿಕಾರದ ಸಂಗವಳಿದು, ಕೂಡಲಸಂಗಯ್ಯಾ, ಲಿಂಗಯ್ಯಾ, ʼಲಿಂಗ ಲಿಂಗ ಲಿಂಗʼವೆನ್ನುತ್ತಾ?