ಬಸವಣ್ಣ   
  ವಚನ - 488     
 
ಕಾಮಸಂಗ ನಿಸ್ಸಂಗವಾಗಿ ಇನ್ನಾವ ಸಂಗವನರಿಯೆನಯ್ಯಾ. ಮಿಗೆವೊಲಿದೆನಾಗಿ ಅಗಲಲಾರೆನು: ನಗೆಮೊಗದರಸಾ, ಅವಧಾರು! ಕೂಡಲಸಂಗಮದೇವಾ, ಬಗಿದು ಹೋಗುವೆ ನಾ ನಿಮ್ಮ ಮನವನು.