ಬಸವಣ್ಣ   
  ವಚನ - 489     
 
ನೋಡಿ ನೋಡಿ ಲಿಂಗಧ್ಯಾನವೆನ್ನ ಮನವು: ರಾಗರಂಜನೆಯ ಉತ್ಪತ್ತಿ ಸ್ಥಿತಿ ಲಯ ನಿನಗೆಂದಾದುವು. ರಾಗರಂಜನೆಯ ಪೂಜೆ ಎನ್ನ ಮನ! ಕೂಡಲಸಂಗಮದೇವಾ, ಅಹಾ, ಎನ್ನ ಮನ!