ಬಸವಣ್ಣ   
  ವಚನ - 496     
 
ಸುರರು ಕಿನ್ನರರು ಕಿಂಪುರುಷರೆಂಬವರನಾರು ಬಲ್ಲರು? ಎನ್ನ ಚಿತ್ತವು ನಿಮ್ಮ ಮೇಲೆ, ಸಂಗಯ್ಯಾ; ಎನ್ನ ಚಿತ್ತವು ನಿಮ್ಮ ಮೇಲೆ, ಲಿಂಗಯ್ಯಾ. ಕೂಡಲಸಂಗಮದೇವಾ, ಅನ್ಯವೆಂಬುದನರಿಯೆನಯ್ಯಾ.