ಭಕ್ತನ ಐಕ್ಯಸ್ಥಲ - ಶರಣರ ಸಂಗ
ಭಕ್ತನೆಂತೆಂಬೆನಯ್ಯಾ ಭವಿಸಂಗ ಬಿಡದನ್ನಕ್ಕ?
ಮಾಹೇಶ್ವರನೆಂತೆಂಬೆನಯ್ಯಾ
ಪರಸ್ತ್ರೀಯ ಪರರರ್ಥದಾಸೆ ಬಿಡದನ್ನಕ್ಕ?
ಪ್ರಸಾದಿಯೆಂತೆಂಬೆನಯ್ಯಾ
ಆಧಿ ವ್ಯಾಧಿ ನಷ್ಟವಾಗದನ್ನಕ್ಕ?
ಪ್ರಾಣಲಿಂಗಿಯೆಂತೆಂಬೆನಯ್ಯಾ
ಪ್ರಾಣ ಸ್ವಸ್ಥಿರವಾಗದನ್ನಕ್ಕ?
ಶರಣನೆಂತೆಂಬೆನಯ್ಯಾ, ಪಂಚೇಂದ್ರಿಯ ನಾಸ್ತಿಯಾಗದನ್ನಕ್ಕ?
ಐಕ್ಯನೆಂತೆಂಬೆನಯ್ಯಾ
ಜನನ ಮರಣ ವಿರಹಿತವಾಗದನ್ನಕ್ಕ?
ಇಂತಪ್ಪ ಭಾಷೆ ವ್ರತ ನೇಮಂಗಳ ನಾನರಿಯೆನಯ್ಯಾ!
ಅಘಟಿತ ಘಟಿತ ವರ್ತಮಾನವ ನಾನರಿಯೆನಯ್ಯಾ!
ನಿಮ್ಮ ಶರಣರ ತೊತ್ತು, ಭೃತ್ಯಾಚಾರವ ಮಾಡುವೆ,
ಕೂಡಲಸಂಗಮದೇವಾ.
Transliteration Bhaktanentembenayyā bhāviya saṅga biḍadannakka?
Māhēśvaranentembenayyā
parastrīya parararthadāse biḍadannakka?
Prasādiyentembenayyā
ādhivyādhi naṣṭavāgadannakka?
Prāṇaliṅgiyentembenayyā
prāṇa svasthiravāgadannakka?
Śaraṇanentembenayyā, pan̄cēndriya nāśavāgadannakka?
Aikyanentembenayyā
janana maraṇa virahitavāgadannakka?
Intappa bhāṣe vrata nēmaṅgaḷa nānariyenayyā!
Aghaṭitaghaṭita vartamānava nānariyenayyā!
Nim'ma śaraṇara tottu, bhr̥tyācārava māḍuve,
kūḍalasaṅgamadēvā.
Manuscript
English Translation 2 How can I claim to be
A Bhakta, unless
I leave off wordlings' fellowship?
How can I claim to be
A Mahēśvara, unless
I cease to covet another's wife and goods?
How can I claim to be
A Prasādi, unless
I shed all pain and pine?
How can I claim to be
A Prāṇaliṅgi, unless
My breath is stilled?
How can I claim to be
A Śaraṇa, unless
My senses are erased?
How can I claim to be
An Aikya, unless
I am free from birth and death?
I 'm ignorant of such
Pledges and vows and rites!
I'm ignorant
Of the present time that makes
Of the impossible, possible!
O Kūḍala Saṅgama Lord,
I render service as
A servant of Thy Śaraṇās!
Translated by: L M A Menezes, S M Angadi
Hindi Translation भक्त कैसे कहूँ यदि ‘भवि’ का संग न छोडूँ?
माहेश्वर कैसे कहूँ, यदि परस्त्री-परधन की आशा न छोडूँ?
प्रसादि कैसे कहूँ यदि आधि, व्याधि नष्ट न हों?
प्राणलिंगी कैसे कहूँ यदि प्राण स्वस्थिर न हों?
शरण कैसे कहूँ यदि पंचेंद्रिय नष्ट न हों?
ऐक्य कैसे कहूँ यदि जनन-मरण रहित न होऊँ?
मैं ऐसे प्राण, व्रत और आचार नहीं जानता,
अघटित घटित वर्तमान नहीं जानता,
तव शरणों का दास हूँ भृत्यवृत्ति करता हूँ कूडलसंगमदेव ॥
Translated by: Banakara K Gowdappa
Telugu Translation భవిసంసర్గము పాయనందాక
నేను భక్తు డెట్ల గుదునయ్యా?
పరస్త్రీ పరధన కాంక్షలు వదలనందాక
నేను మా హేశ్వరుండెట్లుగుదునయ్యా?
ఆధివ్యాధులణగార నందాక
నే ప్రసాది నెట్ల గుదునయ్యా
ప్రాణము సుస్థిరమగు నందాక
నే ప్రాణలింగి నెట్ల గుదునయ్య?
పంచేంద్రియ చపలత్వ మింకునందాక
నేను శరణు డెట్లగుదునయ్యా!
జనన మరణములు సడల నందాక
నే నై క్యు డెట్ల గుదునయ్యా?
అయ్యా ఇట్టి వాగ్వ్రత నియమంబులు
నే నెఱుగనయ్యా , అఘటిత ఘటిత
వర్తమానము నే నెఱుగనయ్యా
మీ శరణుల సేవ భృత్యాచారము
సేతు కూడుల సంగమదేవ!
Translated by: Dr. Badala Ramaiah
Tamil Translation நெறியிலியின் தொடர்பை விடாதவரையில்
பக்தன் என்று எப்படிக் கூறுவது?
பிறன்மனை, பிறர் செல்வம் மீதுள்ள ஆசையை
விடாதவரையில் மாஹேசுவரன் என எப்படிக் கூறுவது?
மனம் சார்ந்த சிக்கல்கள் அகலாதவரை பிரசாதி என
எப்படிக் கூறுவது ஐயனே?
பிராணன் நிலைபெறாத வரையில்
பிராணலிங்கி என எப்படிக் கூறுவது?
ஐம்புலன்கள் ஒடுங்கும் வரையில்
சரணன் என்று எங்ஙனம் கூறுவது?
பிறப்பு இறப்பிலிருந்து விடுபடாத
வரையில் ஐக்கியன் என எங்ஙனம் கூறுவது?
இத்தகு கூற்று, நோன்பு, நியமங்களை
நான் அறியேன் ஐயனே, செயற்கரியவற்றைச்
செய்வதை நானறியேன் ஐயனே.
உம் அடியாருக்கு தொண்டாற்றச் செய்வாய்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
भक्त कैसे म्हणावे तयांना
भवीची संगत सोडल्या विणा
माहेश्वर कैसे म्हणावे तयांना
परस्त्री परधन सोडल्याविणा
प्रसादी कैसे म्हणावे त्यांना
आधि-व्याधि नष्ट झाल्याविणा
प्राणलिंगी कैसे म्हणावे तयांना
प्राण सुस्थिर झाल्याविणा
शरण कैसे म्हणावे तयांना
पंचेद्रिये गुण गेल्याविणा
ऐक्य कैसे म्हणावे तया
जन्म-मरण मुक्त झाल्याविणा
ऐशी भाषा व्रत वेध नियमाना
मी नाही जाणत या सकलांना
ऐशा घटिता- अघटित काळाना
मी नाही जाणत या सकळांना
कूडलसंगमदेवा ! तव शरणांना
करी भ्रत्याचार सदैव तयाना
अर्थ - भवीची (पोटार्थी) संगती सोडल्याशिवाय सद्भक्त होता येणार नाही. परस्त्री व परधनाची आशा सोडल्याशिवाय माहेश्वर स्थलापर्यंत पोहचता येणार नाही. मनोव्यथा आधि व आष्टोत्तर शतव्याधि हया समूळ नष्ट झाल्याशिवाय प्रसादी स्थलापर्यंत पोहोचता येणार नाही. प्राण लिंगात स्थिर झाल्याशिवाय प्राणलिंगी होता येणार नाही. पंचेद्रियाचे अवगुण नष्ट झाल्याशिवाय शरण स्थलापर्यंत पोहोचता येणार नाही. जन्म-मरणाच्या फेऱ्यातून मुक्त अशी स्थिती आल्याशिवाय ऐक्य साधता येणार नाहीं. असल्या गोष्टीकडे मी लक्ष देणार नाही. वरील सर्व नेमाचार त्यातील व्रत, वेष, वेद, शास्त्र, आगम, पुराण आणि त्यातील अघटित किंवा घटित, घटना, वर्तमान, भूत, व भविष्य काळमान हे मला मान्य नाही. ह्या सर्व गोष्टी पाळावयाच्या झाल्यास संपूर्ण जीवन घालवावे लागेल. तरीही त्या पूर्ण होऊ शकणार नाहीत. म्हणून कूडलसंगमदेवाचे (परमेश्वराचे) शरणांची तन-मनाने सेवा करणे आणि धन-संपत्ती अपूर्ण भ्रत्याचार करणे एवढेच मी जाणतो.
Translated by Rajendra Jirobe, Published by V B Patil, Hirabaug, Chembur, Mumbai, 1983
भक्त कसा होईन ? भवीचा संग सोडेपर्यंत,
माहेश्वर कसा होईन ? परस्त्री, परधनाची आशा सोडेपर्यंत,
प्रसादी कसा होईन ? आधी, व्याधी नष्ट होईपर्यंत,
प्राणलिंगी कसा होईन ? प्राण स्थिर होईपर्यंत,
शरण कसा होईन ? पंचेंद्रियांचा नाश होईपर्यंत,
ऐक्य कसा होईन ? जनन, मरण रहित होईपर्यंत,
अशी भाषा, व्रत, नियम मी जाणत नाही.
अघटित घटित वर्तमान मी जाणत नाही देवा.
तुमच्या शरणांची सेवा-भृत्याचार करतो कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಅಘಟಿತ = ಇನ್ನು ಸಂಭವಿಸದೆ ಇದ್ದ ಭವಿಷ್ಯ; ಆಧಿ = ; ನೇಮ = ; ಪರಧನ = ; ಭವಿ = ; ವರ್ತಮಾನ = ; ವಿರಹಿತ = ; ವ್ಯಾಧಿ = ; ವ್ರತ = ; ಸಂಗ = ; ಸ್ವಸ್ಥಿರ = ;
ಕನ್ನಡ ವ್ಯಾಖ್ಯಾನ ಭಕ್ತನಾಗಬೇಕಾದರೆ ಭವಿಸಂಗವನ್ನು ಬಿಡಬೇಕು, ಮಾಹೇಶ್ವರನಾಗಬೇಕಾದರೆ ಪರಸ್ತ್ರೀ ಪರಧನ ವ್ಯಾಮೋಹ ಬಿಡಬೇಕು, ಪ್ರಸಾದಿಯಾಗಬೇಕಾದರೆ ಆಧಿಯೆಂದರೆ ಮಾನಸಿಕವಾದ, ವ್ಯಾಧಿಯೆಂದರೆ ದೈಹಿಕವಾದ ರೋಗರುಜಿನ ನೀಗಬೇಕು, ಪ್ರಾಣಲಿಂಗಿಯಾಗಬೇಕಾದರೆ ಪ್ರಾಣವಾಯು ನಿಯಂತ್ರಿತವಾಗಬೇಕು, ಶರಣನಾಗಬೇಕಾದರೆ ಪಂಚೇಂದ್ರಿಯಗಳ ಉಪಟಳ ತಗ್ಗಬೇಕು, ಐಕ್ಯನಾಗಬೇಕಾದರೆ ಜನನ ಮರಣ ತಪ್ಪಬೇಕು-ಇಂಥ ಭವಿಸಂಗತ್ಯಾಗ ಮುಂತಾದ ವ್ರತಗಳು, ಭಕ್ತ ಮುಂತಾದ ಹಂತಗಳೂ ನನಗೆ ತಿಳಿಯವು-ನನಗೆ ತಿಳಿದಿರುವುದೆಂದರೆ ಶರಣರ ಗುಲಾಮನಾಗಿ ಅವರ ಸೇವೆಯನ್ನು ಮಾಡುತ್ತಿರುವುದೊಂದೇ.
ಷಟ್ಸ್ಥಲಾರೋಹಿಯು ನಾನು ಭಕ್ತ ನಾನು ಮಾಹೇಶ್ವರ ನಾನು ಪ್ರಸಾದಿ ಎಂದು ಮುಂತಾಗಿ ಪ್ರತಿಕ್ಷಣವೂ “ನಾನು”ವನ್ನು ದೊಡ್ಡದಾಗಿಸುತ್ತಲೇ ಹೋಗುವುದಾದರೆ-ಮಿತಿಮೀರಿ ಊದಿದ ಬಾಲಕನ ಕೈಯ ಬಲೂನಿನಂತೆ-ಎಲ್ಲವೂ ಅಹಂಕಾರಸ್ಪೋಟದಲ್ಲಿ ಕೊನೆಗಂಡೀತು! ಅದನ್ನು ಅನುಮೋದಿಸುವುದಿಲ್ಲ ದಾಸೋಹಸಿದ್ಧಾಂತದ ಬಸವಣ್ಣನವರು. ಸಾಧಕನು ಷಟ್ಸ್ಥಲದ ಪರಿವಿಡಿಯಲ್ಲಿ ಆದ್ಯಂತವಾಗಿ ಸೇವಾನಿಷ್ಠನೇ ಆಗಿರಬೇಕೆಂಬುದು ಅವರ ಅಭಿಪ್ರಾಯ. ಬಸವಣ್ಣನವರು ತಮ್ಮನ್ನು “ಶರಣ”ನೆಂದಿರಲಿ-ಭಕ್ತನೆಂದು ಭಾವಿಸಲು ಇಚ್ಛಿಸುವುದಿಲ್ಲ. ಇದು ಶಿವದಾಸಪದ್ಧತಿ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು