ಬಸವಣ್ಣ   
  ವಚನ - 515     
 
ಭಕುತಿರತಿಯ ವಿಕಳತೆಯ ಯುಕ್ತಿಯನೇನ ಬೆಸಗೊಂಬಿರಯ್ಯಾ? ಕಾಮಿಗುಂಟೆ ಲಜ್ಜೆ-ನಾಚಿಕೆ? ಕಾಮಿಗುಂಟೆ ಮಾನಾಪಮಾನವು? ಕೂಡಲಸಂಗನ ಶರಣರಿಗೊಲಿದ ಮರುಳನನೇನ ಬೆಸಗೊಂಬಿರಯ್ಯಾ?