ಬಸವಣ್ಣ   
  ವಚನ - 517     
 
ಸಕ್ಕರೆಯ ಕೊಡನ ತುಂಬಿ ಹೊರಗೆ ಸವಿದರೆ ರುಚಿಯುಂಟೆ? ತಕ್ಕೈಸಿ ಭುಜತುಂಬಿ ಲಿಂಗಸ್ಪರ್ಶನವ ಮಾಡದೆ ಅಕ್ಕಟಾ! ಸಂಸಾರ ವೃಥಾ ಹೋಯಿತ್ತಲ್ಲಾ! ಅದೇತರ ಭಕ್ತಿ? ಅದೇತರ ಯುಕ್ತಿ? ಕೂಡಿಕೋ, ಕೂಡಲಸಂಗಮದೇವಾ.