ಬಸವಣ್ಣ   
  ವಚನ - 536     
 
'ವಿಶ್ವಾಧಿಕೋ ರುದ್ರ'ನ ಹೊಗಳುವ ಶ್ರುತಿಗಳು: "ವಿಶ್ವರೂಪಾಯ ವೈ ನಮಃ ಪರಮರೂಪನೇ ನಮೋ, ಪರತತ್ತ್ವನೇ ನಮೋ, ಆದಿಯಾರೂಢಭಯಂಕರನೇ ನಮೋ, ಹರಿಯನು ಹರಿಸಿದನೇ" ಎಂದು ಶ್ರುತಿಯು ಸಾರುತ್ತಿರಲು- ಸಂಹಾರಕಾರಣನೇ ನಮೋ, ನಮ್ಮ ಕೂಡಲಸಂಗಮದೇವಾ, 'ಮಹನ್‌ ಮಹದ್ ಭ್ಯೋನಮಃ'.