ಬಸವಣ್ಣ   
  ವಚನ - 544     
 
ವಿಷ್ಣು ಕರ್ಮಿ, ರುದ್ರ ನಿಷ್ಕರ್ಮಿ : ಕ್ರಮವನರಿಯದೆ ನುಡಿವಿರೋ! ವೇದಶ್ರುತಿಗಳ ತಿಳಿಯಲರಿಯದೆ ವಾದವ ಮಾಡುವರೆಲ್ಲಾ ಕೇಳಿ: ವಿಷ್ಣು ನಾನಾ ಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ: ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ! "ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಸೇ ಇಂದ್ರಸ್ಯ ಯುಜ್ಯಃ ಸಖಾ" "ತ್ರೀಣಿ ಪದಾ ವಿಚಕ್ರಮೇ ವಿಷ್ಣುರ್‌ಗೋಪಾ ಅದಾಭ್ಯಃ ಅತೋ ಧರ್ಮಾಣಿ ಧಾರಯಾನ್" "ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂಸಃ ಸಮಿಂಧತೇ! ವಿಷ್ಣೋರ್ ಯತ್ ಪರಮಂ ಪದಮ್'" ಎಂಬ ಶ್ರುತಿಯ ವಚನವ ತಿಳಿಯಿಂ ಭೋ! ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ: ನಿಮ್ಮ ಕರ್ಮವು ಅತ್ಯತಿಷ್ಠದ್ ದಶಾಂಗುಲದಿಂದತ್ತತ್ತಲೆ! ಕೂಡಲಸಂಗಮದೇವಾ.