ಬಸವಣ್ಣ   
  ವಚನ - 553     
 
ಬಿದಿರೆಲೆಯ ಮೆಲಿದರೆ ಮೆಲಿದಂತಲ್ಲದೆ, ರಸವನು ಹಡೆಯಲು ಬಾರದು! ಮಳಲ ಹೊಸೆದರೆ ಹೊಸೆದಂತಲ್ಲದೆ, ಸರವಿಯ ಹಡೆಯಲು ಬಾರದು! ನೀರ ಕಡೆದರೆ ಕಡೆದಂತಲ್ಲದೆ, ಬೆಣ್ಣೆಯ ಹಡೆಯಲು ಬಾರದು! ನಮ್ಮ ಕೂಡಲಸಂಗಮದೇವನಲ್ಲದೆ, ಅನ್ಯದೈವಕ್ಕೆರಗಿದರೆ ಹೊಳ್ಳಕುಟ್ಟಿ ಕೈ ಹೊಟ್ಟೆಯಾದಂತಾಯಿತ್ತಯ್ಯಾ!