ಬಸವಣ್ಣ   
  ವಚನ - 563     
 
ರಿಣ ತಪ್ಪಿದ ಹೆಂಡಿರಲ್ಲಿ, ಗುಣ ತಪ್ಪಿದ ನಂಟರಲ್ಲಿ, ಜೀವವಿಲ್ಲದ ದೇಹದಲ್ಲಿ ಫಲವೇನೋ? ಆಳ್ದನೊಲ್ಲದ ಆಳಿನಲ್ಲಿ, ಸಿರಿ ತೊಲಗಿದ ಅರಸಿನಲ್ಲಿ, ವರವಿಲ್ಲದ ದೈವದಲ್ಲಿ ಫಲವೇನೊ? ಕಳಿದ ಹೂವಿನಲ್ಲಿ ಕಂಪ, ನುಳಿದ ಸೂಳೆಯಲ್ಲಿ ಹೆಂಪ, ಕೊಳಚೆಯ ನೀರಿನಲ್ಲಿ ಗುಂಪನರಸುವಿರಿ, ಮರುಳೇ- ವರಗುರು ವಿಶ್ವಕ್ಕೆಲ್ಲ ಗಿರಿಜಾಮನೋವಲ್ಲಭ- ಪರಮ ಕಾರಣಿಕ ನಮ್ಮ ಕೂಡಲಸಂಗಮದೇವ.