ಬಸವಣ್ಣ   
  ವಚನ - 564     
 
ಲಿಂಗಶಿವಾಲಯದ ಮುಂದೆ ಸಿಂಹ ಶೂದ್ರಿಕನಿಲ್ಲದಿಲ್ಲ; ನಂದಿಕೇಶ್ವರ ಭೃಂಗಿನಾಟ್ಯ ನಮ್ಮ ಲಿಂಗನ ಮುಂದೆ; ಇದಕ್ಕೆ ದಿಷ್ಟ, ದೀವಿಗೆ ನಮ್ಮ ಲಿಂಗನ ಮುಂದೆ. ಅನ್ಯದೈವವೆಂಬುದ ತೂರಿಯೂ ಕಾಣಬಾರದು. ನೊಸಲ ಕಣ್ಣಭವನೊಬ್ಬನೆ ನಮ್ಮ ಕೂಡಲಸಂಗಮದೇವ.