ಬಸವಣ್ಣ   
  ವಚನ - 568     
 
ಅವಲಕ್ಷಣ, ನಾಯನುಡಿಯ ಸಡಗರ ಡೋವಿಗೆ ಮೃತ್ಯುವಿನ ನುಡಿಗೊಳಗಾಯಿತ್ತು! ಬೇಡವೋ, ಪರವಾದೀ, ಗಳಹದಿರು; ಬೇಡವೋ, ದೂಷಕಾ, ಬಗುಳದಿರು! ಭಕ್ತಿಗೆಯೂ ಬೇಟಕ್ಕೆಯೂ ಜಾತಿಸೂತಕವುಂಟೆ? ಪರುಷ ಮುಟ್ಟಲು ಕಬ್ಬುನ ಹೊನ್ನಾಯಿತ್ತು, ಕಾಣಾ. ನಮ್ಮ ಕೂಡಲಸಂಗನ ಶರಣರನವರಿವರೆಂದರೆ ಕುಂಭಿಯ ಪಾತಕ ನಾಯಕ ನರಕ ತಪ್ಪದು ಕಾಣಾ.