ಬಸವಣ್ಣ   
  ವಚನ - 572     
 
ನಿಮ್ಮ ವಚನ ಎನ್ನ ಪುಣ್ಯವೆಂಬುದು ಹುಸಿಯಾಯಿತ್ತು ನೋಡಾ ಶಾಸ್ತ್ರದ ವಚನ ಹೋತಿಂಗೆ ಮಾರಿ: ಎಂತು ನಂಬುವೆನಯ್ಯಾ? ʼನಾನು ಕೊಲ್ಲೆ, ನೇಣು ಕೊಂದಿತ್ತೆಂಬʼ ಸೂನೆಗಾರರನೇನೆಂಬೆ, ಕೂಡಲಸಂಗಮದೇವಾ?