ಬಸವಣ್ಣ   
  ವಚನ - 581     
 
ಕಣ್ಣ ಮುಚ್ಚಿ ಕನ್ನಡಿಯ ತೋರುವಂತೆ, ಇರುಳು ಹಗಲಿನ ನಿದ್ರೆ ಸಾಲದೆ ಬೆರಳನೆಣಿಸಿ ಪರಮಾರ್ಥವ ಹಡೆವರೆ ಚೋದ್ಯವಲ್ಲವೆ? ಹೇಳಾ. ಮೂಗ ಮುಚ್ಚಿ ಮುಕ್ತಿಯ ಬಯಸುವ ನಾಚಿಕೆಯಿಲ್ಲದವರ ನಾನೇನೆಂಬೆ, ಕೂಡಲಸಂಗಮದೇವಾ?