ಬಸವಣ್ಣ   
  ವಚನ - 593     
 
ನಾನು ಭಕ್ತ, ನಾನು ಪ್ರಸಾದಿ ಎಂದು ವಿಪ್ರಕರ್ಮವ ಮಾಡುವೆ ಕರ್ಮೀ: ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲು ವಿಪ್ರನ ಕಾಲ ತೊಳೆವರೆ ಲಿಂಗೋದಕ ಹೃದಯದಲ್ಲಿ, ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ! 'ಶ್ರೋತ್ರೋತ್ಕಟ ದುರಾಚಾರೀ| ಯಜ್ಞ ಕೂಪಸಘಾತಕಃ ಉದ್ರಿದೈಕವಿಧಿಃ ಶಾಂತೇ| ವಿಪ್ರರೂಪೇಣ ರಾಕ್ಷಸಃ' ಇದು ಕಾರಣ, ಕೂಡಲಸಂಗಮದೇವಾ, ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.