ಬಸವಣ್ಣ   
  ವಚನ - 598     
 
ಪ್ರಣವನುಚ್ಚರಿಸುವ ಅಪ್ರಮಾಣಿಕರೆಲ್ಲರೂ ಪ್ರಣವ ಮಂತ್ರಾರ್ಥವನೋದಿ ಮಂತ್ರಾರ್ಥವನರಿಯರು. `ಪ್ರಣವ ಓಂ ನಮಃ ಶಿವಾಯ ಪ್ರಣವ ಓಂ ನಮಃ ಶಿವಾಯ, ಪ್ರಣವ ಓಂ ನಮಃ ಶಿವಾಯ' ಎಂದುವು ಶ್ರುತಿಗಳೆಲ್ಲಾ! `ಪ್ರಣವ ಭರ್ಗೋ ದೇವಃ' ಎಂಬುವು ಶ್ರುತಿಗಳೆಲ್ಲಾ. ಕೂಡಲಸಂಗನನರಿಯದ ದ್ವಿಜರೆಲ್ಲ ಭ್ರಮಿತರು!