ಬಸವಣ್ಣ   
  ವಚನ - 603     
 
ಎಮ್ಮವರು ಅಧಿಕರು, ಎಲ್ಲರಿಂದವೂ ಅಧಿಕರು; ಪಾಕವ ಮಾಡುವ ಭಾಂಡ ಸೊಣಗನ ಡವಿಗೆಯಯ್ಯಾ! ಕೆರಹಿನಲ್ಲಿ ಮುಚ್ಚುವುದು ಆವ ಆಗಮವಯ್ಯಾ? ಕೂಡಲಸಂಗಮದೇವಾ, ನಿಮ್ಮ ವಚನವಿಂತೆಂದುದು: `ಭವಿ ನೋಡಿದ ಓಗರ ಲಿಂಗಾರ್ಪಿತವಾಗದೆಂದುʼ.