ಬಸವಣ್ಣ   
  ವಚನ - 609     
 
ಲಿಂಗವಿಲ್ಲದೆ ನಡೆವವರ, ಲಿಂಗವಿಲ್ಲದೆ ನುಡಿವವರ- ಲಿಂಗವಿಲ್ಲದೆ ಉಗುಳ ನುಂಗಿದರೆ- ಅಂದಂದಿಗೆ ಕಿಲ್ಬಿಷವಯ್ಯಾ! ಏನೆಂಬೆನೇನೆಂಬೆನಯ್ಯಾ? ಲಿಂಗವಿಲ್ಲದೆ ನಡೆವವರ ಅಂಗ ಲೌಕಿಕ: ಮುಟ್ಟಲಾಗದು: ಲಿಂಗವಿಲ್ಲದೆ ನುಡಿದ ಶಬ್ದ ಸೂತಕ: ಕೇಳಲಾಗದು! ಲಿಂಗವಿಲ್ಲದೆ ಗಮನಿಸಿದೊಡೆ ಆ ನಡೆನುಡಿಗೊಮ್ಮೆ ವ್ರತಗೇಡಿ, ಕೂಡಲಸಂಗಮದೇವಾ!