ಬಸವಣ್ಣ   
  ವಚನ - 618     
 
ಊಡುವ ಉಡಿಸುವ ಗಂಡನಿದ್ದಂತೆ, ಜೋಡೆ! ಮಿಂಡಂಗೆ ಕಣ್ಣು ಚೆಲ್ಲುವಳ ಕೇಡಿಂಗೆ ಬೆರಗಾದೆ ನಾನು! ನಮ್ಮ ಕೂಡಲಸಂಗಮದೇವನು ಸಿಂಗಾರದ ಮೂಗ ಬಣ್ಣಿಸಿ ಹಲುದೋರ ಕೊಯ್ವ!