ಬಸವಣ್ಣ   
  ವಚನ - 627     
 
ಕರ್ತನನರಿಯದವನು ವಿಪ್ರನಾದರೇನು? ಚತುರ್ವೇದಿಯಾದರೇನು? ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ! ಭವಿ ಮಾಡಿದ ಪಾಕವ ತಂದು, ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನ! ಕೂಡಲಸಂಗನ ಶರಣರ ಒಕ್ಕುದ ಕೊಂಡು ಅನ್ಯವನಾಚರಿಸಿದೊಡೆ ತಪ್ಪದು- ಸೂಕರನ ಶುಚಿರ್ಭೂತತೆಯ ಪ್ರಾಣಿಯಂತೆ!