ಬಸವಣ್ಣ   
  ವಚನ - 632     
 
ಇರುಳೆಂದೇನೋ ಕುರುಡಂಗೆ, ಹಗಲೆಂದೇನೋ ಕುರುಡಂಗೆ? ತಾಳವ ಬಾರಿಸಿದರೇನೊ, ಪಂಚಮಹಾಶಬ್ದವ ಬಾರಿಸಿದರೇನೋ ಕಿವುಡಂಗೆ- ಕೂಡಲಸಂಗಯ್ಯನ ಪಥವಿನ್ನಾವುದೆಂದರಿಯದವಂಗೆ?