ಬಸವಣ್ಣ   
  ವಚನ - 642     
 
ನೋಡಲಾಗದು ನುಡಿಸಲಾಗದು ಪರಸ್ತ್ರೀಯ, ಬೇಡ ಕಾಣಿರೋ! ತಗರ ಬೆನ್ನಲಿ ಹರಿವ ಸೊಣಗನಂತೆ, ಬೇಡ ಕಾಣಿರೋ! ಒಂದಾಸೆಗೆ ಸಾವಿರ ವರುಷ ನರಕದೊಳದ್ದುವ ಕೂಡಲಸಂಗಮದೇವ!