ಬಸವಣ್ಣ   
  ವಚನ - 643     
 
ತೊರೆಯಮೀವ ಅಣ್ಣಗಳಿರಾ, ತೊರೆಯ ಮೀವ ಸ್ವಾಮಿಗಳಿರಾ, ತೊರೆಯಿಂ ಭೋ, ತೊರೆಯಿಂ ಭೋ ಪರನಾರಿಯ ಸಂಗವ ತೊರೆಯಿಂ ಭೋ! ಪರಧನದಾಮಿಷವ ತೊರೆಯಿಂ ಭೋ! ಇವ ತೊರೆಯದೆ ಹೋಗಿ ತೊರೆಯ ಮಿಂದರೆ, ಬರುದೊರೆ ಹೋಹುದು, ಕೂಡಲಸಂಗಮದೇವಾ.