ಬಸವಣ್ಣ   
  ವಚನ - 644     
 
ಸತ್ಯ ಶೌಚ ನಿತ್ಯ ನೇಮವ ತಪ್ಪದೆ ಮಾಡಬಲ್ಲರೆ ಅದು ಲೇಸು. ಮತ್ಸ್ಯ ಕೂರ್ಮ ಮಂಡೂಕ ಜಲದೊಳಗಿದ್ದಲ್ಲಿ ಫಲವೇನು? 'ಚಿತ್ತಮಂತರ್ಗತಂ ದೃಷ್ಟ್ವಾ |ತೀರ್ಥಸ್ನಾನೇನ ಶುಧ್ಯತೀ|| ಶತಕುಂಭಜಲೇ ಶೌಚಂ| ಸುರಾಭಾಂಡಮಿವಾಶುಚಿಃ|| ಆಗಡವ ಮಾಡಿ ಮಾಗುಡವ ಮಿಂದರೆ, ತಾ ಕೊಡಬಲ್ಲನೆ ಕೂಡಲಸಂಗಮದೇವ?