ಬಸವಣ್ಣ   
  ವಚನ - 654     
 
ಗುರೂಪದೇಶ ಮಂತ್ರವೈದ್ಯ; ಜಂಗಮೋಪದೇಶ ಶಸ್ತ್ರವೈದ್ಯ, ನೋಡಾ: ಭವರೋಗವ ಗೆಲುವ ಪರಿಯ ನೋಡಾ. ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ!