ಬಸವಣ್ಣ   
  ವಚನ - 655     
 
ಕೇಳಿರೆ, ಕೇಳಿರೆ, ಹಿರಿಯರು ಗುರುವಿನುಪದೇಶವನು: ಒಂದು ಗೀಜಗನ ಉಪದೇಶದಿಂದ ಪೌಲಸ್ತ್ಯನಂದು ಹಡೆಯನೆ ದಶಮುಖನ? ಶಿರವ ಹರಿದಿಕ್ಕೆ, ಪರಮನಿದ್ದೆಡೆಯು ಕಾಣದೇನಿಳೆಯಲ್ಲಿ? ಕರುಳ ತಂತಿಯುಪದೇಶದಿಂದೆ ಅಸುರನಂದು ಹಡೆಯನೆ ಸುರಪದವ? ತರುಣಿ ಹರಿಣಿಯುಪದೇಶದಿಂದೆ ಗತಿ ಪಥ ಮುಕ್ತಿಯ ಪಡೆದು ಬಟ್ಟಿಯ ಹತ್ತನೆ ವಿನಾಶಕ್ತಿರಾಯನು? ರಂಭೆಯುಪದೇಶದಿಂದ ಶಂಭುವಿನೋಲಗದಲ್ಲಿ ಕುಳ್ಳಿರನೆ ಶ್ವೇತನು? ನಮ್ಮ ಕೂಡಲಸಂಗನ ಶರಣರ ಉಪದೇಶವ ಕೇಳಿದವರಿಗೆ ದುರಿತ ಪಾಪಂಗಳು ಬಿಟ್ಟುಹೋಗಿ, ಮನನಿರತರಾಗಿಪ್ಪರು ಲಿಂಗದಲ್ಲಿ.