ಬಸವಣ್ಣ   
  ವಚನ - 683     
 
ಭಕ್ತರೇ ಸಮರ್ಥರು; ಅಸಮರ್ಥರೆನಲುಂಟೆ? ಚೆನ್ನನೆತ್ತ, ಚೋಳನೆತ್ತ? ಚೆನ್ನನೊಡನುಂಡ ಶಿವ, ಆಹಾ ! ಅಯ್ಯಾ ! ಚೆನ್ನ, ಚೋಳನ ಮನೆಯ ಕಂಪಣಿಗನಯ್ಯಾ ! ಕೂಡಲಸಂಗಮದೇವ ಭಕ್ತಲಂಪಟನಯ್ಯಾ !