ಬಸವಣ್ಣ   
  ವಚನ - 696     
 
ಕಾಯದ ಕಳವಳಕ್ಕಂಜಿ, `ಕಾಯಯ್ಯಾ' ಎನ್ನೆನು; ಜೀವನೋಪಾಯಕ್ಕಂಜಿ `ಈಯಯ್ಯಾ' ಎನ್ನೆನು. "ಯದ್ ಭಾವಂ ತದ್ ಭವತಿ": ಉರಿ ಬರಲಿ, ಸಿರಿ ಬರಲಿ- ʼಬೇಕು, ಬೇಡೆʼನ್ನೆನಯ್ಯಾ. ಆ ನಿಮ್ಮ ಹಾರೆನು, ಮಾನವರ ಬೇಡೆನು; ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ.