ಬಸವಣ್ಣ   
  ವಚನ - 700     
 
ಕರ್ಮವೆಂಬ ಅಂಕದೊಡನೆ ತೊಡರಿದೆ; ಬಿನ್ನಪವನವಧಾರು, ನಿಮ್ಮಾಳಿನ ಭಾಷೆಯ: ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ, ಕರೆದರೋ ಎನಿಸಿದರೆ ನಿಮ್ಮಾಳಲ್ಲಾ, 'ಶಿವಶರಣೆಂ'ಬ ದಂಡೆಯ ಹೂಡಿ ಗಣಮೇಳಾಪವೆಂಬಲಗಿನಿಂದಿರಿವೆ, ಕೂಡಲಸಂಗಮದೇವಾ.