ಬಸವಣ್ಣ   
  ವಚನ - 702     
 
ಗರುಡಿಯ ಕಟ್ಟಿ, ಅರುವತ್ತುನಾಲ್ಕು ಕೋಲಭ್ಯಾಸವ ಮಾಡಿದೆನಯ್ಯಾ: ಇರಿವ ಘಾಯ, ಕಂಡೆಯ ಭೇದವಿನ್ನೂ ತಿಳಿಯದು! ಪ್ರತಿಗರುಡಿಕಾರ ಬಿರುದ ಪಾಡಿಂಗೆ ಒದಗಲು, ವೀರಪಟ್ಟೆಯ ಕಟ್ಟಿ, ತಿಗುರನೆರಿಸಿಕೊಂಬೆ. ಗುರುಕಳನೇರಿ, ಕಠಾರಿಯ ಕೊಂಡಲ್ಲಿ `ಹೋಯಿತ್ತು ಗಳೆ' ಎಂದರೆ ಎನ್ನ ನಿನ್ನಲ್ಲಿ ನೋಡು, ಕೂಡಲಸಂಗಮದೇವಾ!