ಬಸವಣ್ಣ   
  ವಚನ - 705     
 
ಕಟ್ಟುವೆನುಪ್ಪರಗುಡಿಯ ಜಗವರಿಯೆ; ಮಾಡುವೆನೆನ್ನ ಕಾಯ ಕೆಡೆವನ್ನಕ್ಕ. ಬೇಡುವುದೆನ್ನ ತನುಮನಧನವ, ಬೇಡಲಾರದ ಹಂದೇ, ನೀ, ಕೇಳಾ: ಈ ಬಿರುದು ಸಂದಿತ್ತು, ಕೂಡಲಸಂಗಮದೇವಾ.