ಮಾಹೇಶ್ವರನ ಭಕ್ತಸ್ಥಲ - ಭಕ್ತಿನಿಷ್ಟೆ
ಒಡೆಯರಿಲ್ಲದ ಮನೆಯ ತುಡುಗುಣಿ ನಾಯಿ ಹೊಗುವಂತೆ
ನೀವಿಲ್ಲದವರ ಮನೆಯ ಹೊಗೆನು, ಸಂಗಯ್ಯಾ.
ಶ್ವಪಚೋಪಿಗಳಾಗಲಿ, ಕೂಡಲಸಂಗಯ್ಯಾ,
ನೀವಿದ್ದವನೇ ಕುಲಜನು.
Transliteration Oḍeyarillada maneya tuḍuguṇi nāyi hōguvante
nīnilladavara maneya hogenu, saṅgayya.
Śvapacōpigaḷāgali, kūḍalasaṅgayya,
nīviddavanē kulajanu.
Manuscript
English Translation 2 O Saṅga Lord, like a thievish dog
That slips into a house
Which has no master in, I will not enter
A house where you are not.
O Kūḍala Saṅgama Lord,
Howsoever low-born may one be,
He is well born in whom you are.
Translated by: L M A Menezes, S M Angadi
Hindi Translation गृह-स्वामी रहित गृह में
जैसे धूर्त श्वान घुसता है
तुम से रहित गृह में, संगमेश
मैं प्रवेश नहीं करूँगा।
श्वपच होने पर भी, तुम हो तो कुलज
कूडलसंगमदेव ॥
Translated by: Banakara K Gowdappa
Telugu Translation ప్రభుడు లేని యింట చెడగరి కుక్క చేరినట్లు
నీవులేని కడకు నే నేగలేనయ్యా సంగా
శ్వపచులయ్యు నిన్ను గలవా రే కులజులయ్యా!
Translated by: Dr. Badala Ramaiah
Tamil Translation உடையரற்ற இல்லத்து திருட்டு நாய் உள்ளேசெல்வதனைய
நீர் அற்ற இல்லத்திற்குச் செல்லேன் ஐயனே.
கூடல சங்கம தேவனே, புலையனாயின் என்ன
உன் பக்தன் எனின் அவனே நற்குலத்தவனாம்.
Translated by: Smt. Kalyani Venkataraman, Chennai
Marathi Translation
मालक नसलेल्या घरी जाणे म्हणजे चोरटे कुत्रे गेल्यासम
तू नसलेल्या घरी मी जात नाही कूडलसंगमदेवा.
श्वपच असले तरी तुम्ही असलेले घर कुलीन आहे.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಬಿಜ್ಜಳನ ಅರಮನೆಯನ್ನು ಪ್ರವೇಶಿಸುತ್ತಿದ್ದರೆಂಬುದು ನಿಸ್ಸಂಶಯವಾಗಿರುವುದಾಗಿ – ಈ ವಚನದಲ್ಲಿ ಅವರು ಮಾಡಿ(ದಂತಿ)ರುವ ಪ್ರತಿಜ್ಞೆ ಅವರದಲ್ಲ- ಈ ವಚನವೂ ಅವರದಲ್ಲ. ಈ ಪ್ರಕ್ಷೇಪಕಾರರು ಬಸವಣ್ಣನವರನ್ನು ಒಂದು ಮಡಿಯ ಮುದ್ದೆಯನ್ನಾಗಿ ಮಾಡಬೇಕೆಂದಿರುವರು !
ಆಗಲಿ - ಈ ವಚನದ ಧಾಟಿಯನ್ನಾದರೂ ಗಮಿನಿಸಬಹುದು : ನಾನು ಲಿಂಗವಿಲ್ಲದವರ ಮನೆಯನ್ನು ಪ್ರವೇಶಿಸುವುದಿಲ್ಲ-ಯಜಮಾನನಿಲ್ಲದ ಮನೆಗೆ ಕದ್ದು ತಿನ್ನುವ ನಾಯಿ ನುಗ್ಗಿದಂತೆನಿಸುವುದದು ನನಗೆ. ಲಿಂಗಧಾರೀ ಶಿವಭಕ್ತನಿರುವ ಮನೆಯಾದರೋ ದೇವಾಲಯದಂತೆ ಪವಿತ್ರ ನನಗೆ. ಆ ಮನೆಯೊಡೆಯನು ಅಸ್ಪೃಶ್ಯನೇ ಆಗಿರಲಿ ಅದರ ಪಾವಿತ್ರ್ಯ ಕಡಿಮೆಯಾಗುವುದಿಲ್ಲ. ಯಾಕೆಂದರೆ ಲಿಂಗ ಧರಿಸಿದವರು ಸತ್ಕುಲ ಪ್ರಸೂತರಂತೆ ಮಹನೀಯರೇ ಆಗಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು