ಬಸವಣ್ಣ   
  ವಚನ - 718     
 
ಆವ ಕುಲವಾದಡೇನು? ಶಿವಲಿಂಗವಿದ್ದವನೆ ಕುಲಜನು. ಕುಲವನರಸುವರೆ ಶರಣರಲ್ಲಿ, ಜಾತಿ ಸಂಕರನಾದ ಬಳಿಕ? 'ಶಿವೇ ಜಾತಃಕುಲೇಧರ್ಮ| ಪೂರ್ವಜನ್ಮ ವಿವರ್ಜಿತಃ ಉಮಾ ಮಾತಾ ಪಿತಾ ರುದ್ರ| ಈಶ್ವರಃ ಕುಲಮೇವ ಚ' ಎಂದುದಾಗಿ, ಒಕ್ಕುದ ಕೊಂಬೆನವರಲ್ಲಿ, ಕೂಸ ಕೊಡುವೆ, ಕೂಡಲಸಂಗಮದೇವಾ, ನಂಬುವೆ ನಿಮ್ಮ ಶರಣರನು.