ಬಸವಣ್ಣ   
  ವಚನ - 729     
 
ಅಂಕ ಕಂಡಾ: ಕೋಲಾಸೆ ಮತ್ತೇಕಯ್ಯಾ ? ಲೆಂಕ ಕಂಡಾ: ಪ್ರಾಣದಾಸೆ ಮತ್ತೇಕಯ್ಯಾ? ಭಕ್ತ ಕಂಡಾ: ತನುಮನಧನದಾಸೆ ಮತ್ತೇಕಯ್ಯಾ? ನಿಮ್ಮ ಅಂಕೆಗೆ ಝಂಕೆಗೆ ಶಂಕಿಸಿದೆನಾದರೆ ಎನ್ನ ಲೆಂಕತನಕ್ಕೆ ಹಾನಿ, ಕೂಡಲಸಂಗಮದೇವಾ!