ಬಸವಣ್ಣ   
  ವಚನ - 732     
 
ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬವನ ಕುಲವೇನೋ? ದೇವಾ, ನೀನೊಲಿದವನ, ಸ್ವಾಮೀ, ನೀ ಹಿಡಿದವನ ಕುಲವೇನೋ? ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ! ಕೂಡಲಸಂಗಮದೇವಾ.