ಬಸವಣ್ಣ   
  ವಚನ - 733     
 
ಹುಟ್ಟಿದ ಮಕ್ಕಳೆಲ್ಲಾ ಅರ್ಥ ಪ್ರಾಣಭಿಮಾನಕ್ಕೆ ಒಡೆಯರಾದ ಪರಿಯ ನೋಡಾ: ಅಟ್ಟಡಿಗೆಯ ವಿಷವನು ನಿಮಗೆ ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ! ಕೂಡಲಸಂಗಮದೇವಯ್ಯಾ, ನಿನಗೆಂದಟ್ಟಡಿಗೆಯ ನೀಡ ಕಲಿಸಿದಾತ ಕೆಂಬಾವಿಯ ಭೋಗಯ್ಯಾ.