ಬಸವಣ್ಣ   
  ವಚನ - 737     
 
ಆನೆ ಅಂಕುಶಕ್ಕೆ ಅಂಜುವುದೆ, ಅಯ್ಯಾ, ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ? ಆನೀ ಬಿಜ್ಜಳಂಗಜುವೆನೆ, ಅಯ್ಯಾ, ಕೂಡಲಸಂಗಮದೇವಾ, ನೀನು ಸರ್ವಜೀವ ದಯಾಪಾರಿಯಾದ ಕಾರಣ ನಿನಗಂಜುವೆನಲ್ಲದೆ?